ಶಿವಮೊಗ್ಗ,ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆ ವತಿಯಿಂದ ರಾಜ್ಯದ್ಯಕ್ಷರಾದ ಕೆ ಜನಾರ್ಧನ್ ಸಾಲಿಯಾನ್ ರವರ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಯವರಿಗೆ ಪ್ರತಿಭಟನೆಯ ಮುಖಾಂತರ ಮನವಿ ಸಲ್ಲಿಸಲಾಯಿತು.
ಚಿಕ್ಕಮಗಳೂರು, ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ಅತ್ತಿ ಗುಂಡಿ ಸಮೀಪ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಮತ್ತು ಪ್ರಕೃತಿ ವಿನಾಶ ಮಾಡಿ ಗುಡ್ಡವನ್ನು ಕೊರೆದು ವನ್ಯಜೀವಿಗಳಿಗೆ ಹಿಂಸೆ ಉಂಟು ಮಾಡಿ ಅಕ್ರಮವಾಗಿ ನಿರ್ಮಿಸುತ್ತಿರುವ ಕೆಲವು ಅನಧಿಕೃತ ಕಟ್ಟಡಗಳನ್ನು ತೆರೆವುಗೊಳಿಸಿ ಅರಣ್ಯವನ್ನು ಸಂರಕ್ಷಿಸಿ ವನ್ಯಜೀವಿಗಳಿಗೆ ನಿರ್ಭೀತಿಯಿಂದ ಜೀವಿಸಲು ಅನುವು ಮಾಡಿ ಕೊಟ್ಟು ಪರಿಸರ ಮತ್ತು ಪ್ರಕೃತಿಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿರುವ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರು ಮಣಿಯದೆ ಈ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ಪರಿಸರ ಮತ್ತು ಪ್ರಕೃತಿ ನಾಶವಾಗದಂತೆ ತಡೆಯಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್, ಮಾಲತೇಶ್ ರಾಜ್ಯಕಜಾಂಚಿಗಳಾದ ಸಿದ್ಧಣ್ಣಯ್ಯ ರಾಜ್ಯ ಉಪಾಧ್ಯಕ್ಷರಾದ ವೀಣಾ ಎಚ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕಿರಣ್ ಕುಮಾರ್ ಕೆ ಪ್ರಮುಖರಾದ ಜೀವನ್ ಕೆ ಸಹಕಾರ್ಯದರ್ಶಿ ಪಾರ್ತಿ ಬನ್ ನಿರ್ದೇಶಕರಾದ ಸಂಗೇಶ್ವರ ಅಶೋಕ್ ಶೋಭಾ ಬಿಜಿ ರಾಮಣ್ಣ ರಾಗಿಗುಡ್ಡ ಪುಷ್ಪ ಒಡೆಯರ್ ಪುಷ್ಪ, ಮೈಕಲ್ ಮುರುಗನ್ ಲಕ್ಷ್ಮೀಶ ತಾಲೂಕು ಸಂಚಾಲಕರಾದ ಪ್ರತಾಪ್ ನಂದೀಶ್ ಪ್ರಾಣೇಶ್ ಮತ್ತಿತರರು ಭಾಗವಹಿಸಿದ್ದರು



