ವಿಜಯನಗರ,ವಿಶ್ವಪರಂಪರೆ ತಾಣ ಹಂಪಿಯು ಮೂರು ದಿನಗಳ ಉತ್ಸವಕ್ಕೆ ಸಜ್ಜಾಗಿದ್ದು, ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಸ್ಮರಿಸಲಿದೆ.
ಕಲೆ, ಸಾಹಿತ್ಯ, ಸಂಗೀತದ ಈ ಮಹಾಸಂಗಮದಲ್ಲಿ ಖ್ಯಾತ ತಾರೆಯರ ಮನರಂಜನೆ, ಧ್ವನಿ ಮತ್ತು ಬೆಳಕು ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಭಾರತದ ಭವ್ಯ ಪರಂಪರೆಯ ಹೆಮ್ಮೆಯ ದ್ಯೋತಕ, ವಿಶ್ವಪರಂಪರೆ ತಾಣ ಹಂಪಿಯ ಪರಿಸರ ಮೂರು ದಿನಗಳ ಉತ್ಸವಕ್ಕೆ ಸಜ್ಜಾಗಿದೆ.
ಕಲೆ, ಸಾಹಿತ್ಯ, ಸಂಗೀತ ಸಂಗಮವಾಗಿದ್ದ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸ್ಮರಿಸಿಕೊಳ್ಳುವ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜತನದಿಂದ ಮುಂದುವರಿಸುವ ಉದ್ದೇಶದಿಂದ ಜರುಗುತ್ತಿರುವ ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಇಂದಿನಿಂದ ಮೂರು ದಿನಗಳ ಕಾಲ ಐತಿಹಾಸಿಕ ಹಂಪಿ ಉತ್ಸವ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವ ನಡೆಯಲಿದೆ.ಹಂಪಿ ಉತ್ಸವ ಉದ್ಘಾಟನೆಯನ್ನ ನಾಡದೊರೆ ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ.
ಶಿವರಾಜ್ ಕುಮಾರ್, ಅಶ್ವಿನಿ ಪುನಿತ್ ರಾಜ್ ಕುಮಾರ್, ಗಣೇಶ ಸೇರಿದಂತೆ ನಟ, ನಟಿಯರು ಭಾಗಿಮೂರು ದಿನಗಳ ಕಾಲ ಜನರನ್ನ ರಂಜಿಸಲಿರುವ ಕಿರುತೆರೆ ಹಿರಿತೆರೆಯ ಹಾಗೂ ರಿಯಾಲಿಟಿ ಶೋಗಳ ನಟ, ನಟಿಯರು13ರಂದು ಶಿವರಾಜ್ ಕುಮಾರ್, ಅಶ್ವಿನಿ ಪುನಿತ್ ರಾಜ್ ಕುಮಾರ್,ರುಕ್ಮಿಣಿ ವಸಂತ್, ವಿಜಯ್ ಪ್ರಕಾಶ್ ಹರಿಹರನ್ ಬರಲಿದ್ದಾರೆ.
14ರಂದು ಗೋಲ್ಡನ್ ಸ್ಟಾರ್ ಗಣೇಶ, ರಾಜ್ ಬಿ ಶೆಟ್ಟಿ, ಸಪ್ತಮಿಗೌಡ, ಜಹೀದ್ ಖಾನ್, ಬಿಗ್ ಬಾಸ್ ವಿನ್ನರ್ ಗಿಲ್ಲಿ ಮತ್ತು ಕಾವ್ಯ, ಅರ್ಜುನ್ ಜನ್ಯ, ನವೀನ್ ಸಜ್ಜು ಕಾರ್ಯಕ್ರಮ.
15ರಂದು ರಜಿತಾ ರಾಮ್, ಡಾಲಿ ಧನಂಜಯ, ದ್ರುವ ಸರ್ಜಾ, ಬಿಗ್ ಬಾಸ್ ವಿನ್ನರ್ ಹನುಮಂತ, ಗಾಯಕ ರಘು ದೀಕ್ಷಿತ್, ಗಾಯಕಿ ಮಂಗ್ಲಿ ಕಾರ್ಯಕ್ರಮ ನಡೆಯಲಿದೆ.

ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ.
ಪ್ರಮುಖ ಆಕರ್ಷಣೆಯಾಗಿ ಹಂಪಿ ಬೈ ಸ್ಕೈ, ಸಾವಿರ ಡ್ರೋಣ್ ಶೋ, ಧ್ವನಿ ಬೆಳಕು, ವಸ್ತು ಪ್ರದರ್ಶನ, ಬೋಟ್ ರೈಡಿಂಗ್ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಬಾರಿಯ ಉತ್ಸವವು ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇನ್ನು ಹಂಪಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳು ಇರಲಿದೆ.
ಮೈಸೂರು ದಸರಾದಲ್ಲಿ ಜನಮನ ಗೆದ್ದಿದ್ದ ಮಾದರಿಯಲ್ಲೇ, ಈ ಬಾರಿ ಆಕಾಶದಲ್ಲಿ 1,000 ಡ್ರೋನ್‌ಗಳು ಚಿತ್ತಾರ ಬಿಡಿಸಲಿವೆ. ಗಾಯತ್ರಿ ಪೀಠದ ವೇದಿಕೆಯ ಸಮೀಪದಲ್ಲಿ ಈ ಹೈಟೆಕ್ ಪ್ರದರ್ಶನ ನಡೆಯಲಿದೆ.
ಈ ಡ್ರೂನ್ ಮೂಲಕ ವಿಜಯನಗರ ಸಾಮ್ರಾಜ್ಯದ ಉದಯ, ಸುರ್ಣ ಯುಗ ಮತ್ತು ಯುದ್ಧದ ಪ್ರಮುಖ ಕ್ಷಣಗಳನ್ನು ಚಿತ್ರಿಸಲಾಗುತ್ತದೆ. ಜತೆಗೆ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕ, ಪ್ರಖ್ಯಾತ ಅರಸರಾದ ಶ್ರೀಕೃಷ್ಣದೇವರಾಯ ಮತ್ತು ದೇವರಾಯರ ಚಿತ್ರಗಳು ಆಕಾಶದಲ್ಲಿ ಮೂಡಿಬರಲಿವೆ.

ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ.
ಇನ್ನು ಈ ಬಾರಿಯ ಉತ್ಸವದಲ್ಲಿ ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲು ರಥ, ವಿರೂಪಾಕ್ಷ ದೇಗುಲದ ಗೋಪುರ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಲೋಟಸ್ ಮಹಲ್ ಮತ್ತು ವಿಜಯ ವಿಠಲ ದೇಗುಲದ ಕಲಾಕೃತಿಗಳು ಡ್ರೋನ್ ಮೂಲಕ ಕಂಗೊಳಿಸಲಿವೆ.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿರುವ ಪ್ರಕಾರ, ಈ ವರ್ಷದ ಉತ್ಸವಕ್ಕೆ ದೇಶ-ವಿದೇಶಗಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ನೇತೃತ್ವದಲ್ಲಿ ಜಿಲ್ಲಾಡಳಿತವು ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.



