ಬೆಳಗಾವಿಯ ಚಿಕ್ಕೋಡಿಯ ಮದುವೆ ಅಂದ್ರೆ ಸಾಕು ಅಲ್ಲಿ ಸಂಭ್ರಮ, ಸಡಗರ ಇದ್ದೇ ಇರುತ್ತೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಲ್ಯಾಣ ಕಲ್ಯಾಣ ಕಾರ್ಯ ನೆರವೇರಿಸುವವರೇ ಹೆಚ್ಚು. ಆದ್ರೆ, ಇಲ್ಲೊಂದು ನವಜೋಡಿ ತಮ್ಮ ಮದುವೆಯ ಖುಷಿಯ ಕ್ಷಣವನ್ನು ಸಮಾಜಕ್ಕೆ ಮಾದರಿಯಾಗುವಂತೆ ಆಚರಿಸಿದ್ದಾರೆ.
ತಾಳಿ ಕಟ್ಟಿದ ಶುಭಗಳಿಗೆಯಲ್ಲಿ, ಬದುಕಿನ ಹೊಸ ಪಯಣದ ಜೊತೆಗೆ ಸಾವಿನ ನಂತರವೂ ಸಾರ್ಥಕತೆ ಮೆರೆಯಲು ಮುಂದಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ನವ ದಂಪತಿಗಳಾದ ವಾಗೀಶ ಗುರುಮೂರ್ತಯ್ಯ ಕಾಡದೇವರಮಠ ಹಾಗೂ ಕೋಮಲ್ ವಾಗೀಶ ಕಾಡದೇವರಮಠ ಇಂದು(ಫೆ.12) ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಆದರೆ ಈ ಮದುವೆ ಕೇವಲ ಅಕ್ಷತೆ, ಔತಣಕೂಟಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ ಒಂದು ಮಹತ್ವದ ನಿರ್ಧಾರಕ್ಕೆ ಸಾಕ್ಷಿಯಾಯ್ತು. ಮದುವೆಯ ಸುಂದರ ಕ್ಷಣದಲ್ಲೇ ಈ ನವದಂಪತಿ ಸ್ವಯಂಪ್ರೇರಿತವಾಗಿ ಅಂಗಾಂಗ ದಾನಕ್ಕೆ ವಾಗ್ದಾನ ಮಾಡುವ ಮೂಲಕ ಮಾದರಿ ಆಗಿದ್ದಾರೆ.
ಅಂಗಾಂಗ ದಾನದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರುವುದು ಸಾವಿನ ನಂತರ ಮಣ್ಣಲ್ಲಿ ಮಣ್ಣಾಗುವ ದೇಹ, ಹಲವು ಜನರಿಗೆ ಉಪಯೋಗಕ್ಕೆ ಬರಲಿ ಎಂದು ಮದುವೆ ದಿನವೇ ಅಂಗಾಂಗ ದಾನದ ಪ್ರತಿಜ್ಞೆಗೈದು, ಅದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಆರೋಗ್ಯ ಇಲಾಖೆ ವೆಬ್ಸೈಟಿನಲ್ಲಿ ನೋಂದಣಿ ಕಾರ್ಯ ಪೂರ್ಣ ಮಾಡಿದ್ದಾರೆ.



