ಮಹಾರಾಷ್ಟ್ರ ಪ್ರವಾಸದ ಸಂದರ್ಭದಲ್ಲಿ,ಸಿಖ್ ಧರ್ಮದ ಐದು ಅತ್ಯುನ್ನತ ತಖ್ತ್‌ಗಳಲ್ಲಿ ಒಂದಾಗಿರುವ ನಾಂದೇಡ್ ನ ಪ್ರಸಿದ್ಧ ಶ್ರೀ ಹಜುರ್ ಸಾಹಿಬ್ ಗುರುದ್ವಾರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರು, ಶಾಸಕರಾದ ಬಿ. ವೈ, ವಿಜಯೇಂದ್ರನವರು ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗೋದಾವರಿ ತೀರದಲ್ಲಿರುವ ಈ ಸುಂದರ ಗುರುದ್ವಾರ, 1708ರಲ್ಲಿ ಸಿಖ್ ಧರ್ಮದ 10ನೇ ಗುರು ಶ್ರೀ ಗೋಬಿಂದ್ ಸಿಂಗ್ ಜೀ ರವರ ಅಂತಿಮ ಯಾತ್ರೆಯ ಪವಿತ್ರ ಸ್ಥಳವಾಗಿದ್ದು, ಇಲ್ಲಿಗೆ ಭೇಟಿ ನೀಡಿದ್ದು ಮನಸ್ಸಿಗೆ ಶಾಂತಿಯನ್ನು, ಹೊಸ ಚೈತನ್ಯವನ್ನು ನೀಡಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಶ್ರೀ ಸಿದ್ದೇಶ್ ನಾಗೇಂದ್ರ, ಮುಖಂಡರಾದ ನಂಜುಂಡೇಶ್ ಮತ್ತಿತರರು ಉಪಸ್ಥಿತರಿದ್ದರು.



