ದಾವಣಗೆರೆ | ಗುರುಕುಲ ಶಾಲೆಗೆ ಕಿರೀಟಪ್ರಾಯ ಗೌರವ ; ಯುಕೆಜಿ ಪುಟಾಣಿ ಪುಣ್ಯಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2026ರ ಪ್ರಶಸ್ತಿ

ದಾವಣಗೆರೆ

ದಾವಣಗೆರೆ, ನಗರದ ಪ್ರತಿಷ್ಠಿತ ಗುರುಕುಲ ಶಾಲೆಗೆ ಹೆಮ್ಮೆಯ ಕ್ಷಣ. ಶಾಲೆಯ ಯುಕೇಜಿ ವಿದ್ಯಾರ್ಥಿನಿ ಪುಣ್ಯಾ ಅವರು ತಮ್ಮ ಅಪೂರ್ವ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2026 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು, ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಪ್ರತಿಬಿಂಬಿಸುವ ವಿಷಯದ ಮೇಲೆ 5 ನಿಮಿಷ 30 ಸೆಕೆಂಡುಗಳ ಕಾಲ ನಿರ್ವಿಘ್ನವಾಗಿ, ಆತ್ಮವಿಶ್ವಾಸ ಹಾಗೂ ಸ್ಪಷ್ಟ ಉಚ್ಚಾರಣೆಯೊಂದಿಗೆ ಮನಮೋಹಕ ಕನ್ನಡ ಭಾಷಣ ಮಾಡಿದ ಪುಣ್ಯಾ, ತೀರ್ಪುಗಾರರು ಹಾಗೂ ಶ್ರೋತೃಗಳ ಮನ ಗೆದ್ದಿದ್ದಾರೆ.

ಇಂತಹ ಚಿಕ್ಕ ವಯಸ್ಸಿನಲ್ಲೇ ಅಪಾರ ಧೈರ್ಯ, ಭಾಷಾ ಪ್ರಾವೀಣ್ಯ ಮತ್ತು ವೇದಿಕೆಯ ಆತ್ಮಸ್ಥೈರ್ಯ ಪ್ರದರ್ಶಿಸಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಈ ಸಾಧನೆ ಗುರುಕುಲ ಶಾಲೆಯ ಇತಿಹಾಸದಲ್ಲೇ ಒಂದು ಅಪೂರ್ವ ಹಾಗೂ ಮರೆಯಲಾಗದ ಕ್ಷಣವಾಗಿ ದಾಖಲೆಯಾಗಿದೆ.

ಪುಣ್ಯಾಳ ಈ ಯಶಸ್ಸು ಶಾಲೆಯ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ ಪಾಲಕರು ಹಾಗೂ ಶಿಕ್ಷಕರಲ್ಲಿ ಅಪಾರ ಹೆಮ್ಮೆ ಮತ್ತು ಉತ್ಸಾಹವನ್ನು ಮೂಡಿಸಿದೆ.

ಈ ಮಹಾನ್ ಸಾಧನೆಗೆ ಶಾಲೆಯ ಕಾರ್ಯದರ್ಶಿಗಳಾದ ಅಬ್ದುಲ್, ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕ–ಶಿಕ್ಷಕಿಯರು ಪುಣ್ಯಾಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಭವಿಷ್ಯದಲ್ಲಿಯೂ ಇನ್ನೂ ದೊಡ್ಡ ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದ್ದಾರೆ.

ಗುರುಕುಲ ಶಾಲೆಗೆ ಪುಣ್ಯಾ ತಂದಿರುವ ಈ ಗೌರವ, ಮುಂದಿನ ಪೀಳಿಗೆಗೆ ಪ್ರೇರಣೆಯ ದೀಪವಾಗಲಿದೆ ಎಂದು ಶಾಲಾ ವಲಯ ಅಭಿಪ್ರಾಯಪಟ್ಟಿದೆ.

Author