ಬೆಂಗಳೂರು, ವಿಜಯ ನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಭಯಾನಕ ರೀತಿಯಲ್ಲಿ ತ್ರಿಬಲ್ ಮರ್ಡರ್ ನಡೆದಿದೆ. ಮಗನಿಂದಲೇ ನಡೆದಿದೆ.ಅಕ್ಷಯ್ ಕುಮಾರ್ ಬಂಧಿತ ಆರೋಪಿ.
ಈತ ಜ.27 ರಂದು ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾಳನ್ನ ಕೊಲೆ ಮಾಡಿದ್ದು, ಮನೆಯಲ್ಲಿಯೇ ಮೃತದೇಹಗಳನ್ನು ಹೂತುಹಾಕಿ ಬೆಂಗಳೂರಿಗೆ ಪರಾರಿಯಾಗಿದ್ದ ಎನ್ನಲಾಗಿದೆ.
ಬಳಿಕ ಅಕ್ಷಯ್ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೊಡಲು ಮುಂದಾಗಿದ್ದ. ದೂರು ಕೊಡಲು ಹೋದಾಗ, ಆತನ ನಡವಳಿಕೆ ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು.
ಬಳಿಕ ಪೊಲೀಸರು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರೋದಾಗಿ ಬಾಯ್ಬಿಟ್ಟಿದ್ದಾನೆ.



