ಒಡಿಶಾ | ಬ್ಯಾಂಕಿಗೆ ಹೋಗಬೇಕಾದರೆ ಇಲ್ಲಿ ಏಣಿ ಹತ್ತಲೇಬೇಕು

ಒಡಿಶ

ಒಡಿಶಾ, ಯಾವುದೇ ಕಟ್ಟದಲ್ಲಿ ಎಷ್ಟೇ ಮಹಡಿ ಇದ್ದರೂ ಅದಕ್ಕೆ ತೆರಳಲು ಲಿಫ್ಟ್ ಜೊತೆಗೆ ಮೆಟ್ಟಿಲುಗಳು ಇದ್ದೇ ಇರುತ್ತವೆ ಆದರೆ ಇಲ್ಲಿರುವ ಕಟ್ಟಡವೊಂದರ ಮೊದಲ ಮಹಡಿಯಲ್ಲಿರುವ ಬ್ಯಾಂಕ್ ಶಾಖೆಗೆ ಹೋಗಲು ಮೆಟ್ಟಿಲುಗಳೇ ಇಲ್ಲ ಬ್ಯಾಂಕ್ ಸಿಬ್ಬಂದಿಗಳು, ಗ್ರಾಹಕರು ಈ ಶಾಖೆಗೆ ತೆರಳಬೇಕಾದರೆ ಏಣಿಯನ್ನೇ ಬಳಸಬೇಕು,

ಒಡಿಶಾದ ಭದ್ರಕ್ (Bhadrak) ಜಿಲ್ಲೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯೊಂದಕ್ಕೆ ಗ್ರಾಹಕರು ಮತ್ತು ಸಿಬ್ಬಂದಿ ಏಣಿ ಬಳಸಿ ಪ್ರವೇಶಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ಆದರೆ ಇದಕ್ಕೂ ಒಂದು ಕಾರಣವಿದೆ ಅದುವೇ ಇತ್ತೀಚೆಗೆ ಸ್ಥಳೀಯ ಆಡಳಿತವು ನಡೆಸಿದ ಅತಿಕ್ರಮಣ ತೆರವು ಕಾರ್ಯಾಚರಣೆ.

ಅಂದಹಾಗೆ ಇಲ್ಲಿನ ಆಡಳಿತ ಒತ್ತುವರಿ ಜಾಗದಲ್ಲಿ ನಿರ್ಮಿಸಲಾದ ಕಟ್ಟಡಗಳನ್ನು ತೆರವುಗೊಳಿಸಿರುವುದು ಅದರಂತೆ ಈ ಬ್ಯಾಂಕ್ ಶಾಖೆಯ ಮೆಟ್ಟಿಲುಗಳನ್ನು ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿತ್ತು.

ಹಾಗಾಗಿ ಅಧಿಕಾರಿಗಳು ಒತ್ತುವರಿ ಜಾಗದಲ್ಲಿ ನಿರ್ಮಿಸಲಾದ ಮೆಟ್ಟಿಲುಗಳನ್ನು ಧ್ವಂಸಗೊಳಿಸಿದ್ದಾರೆ.

ಮೆಟ್ಟಿಲುಗಳನ್ನು ತೆರವುಗೊಳಿಸಿದ ಕಾರಣ ಮೊದಲ ಮಹಡಿಯಲ್ಲಿರುವ ಶಾಖೆಗೆ ಹೋಗಲಾಗದೆ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಗ್ರಾಹಕರು ಏಣಿಯನ್ನು ಬಳಸಿ ಶಾಖೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಪರ್ಯಾಯ ವ್ಯವಸ್ಥೆ ಆಗುವ ವರೆಗೂ ಸಿಬ್ಬಂದಿಗಳು ಹಾಗೂ ಗ್ರಾಹಕರು ಏಣಿಯನ್ನೇ ಬಳಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಅಲ್ಲದೆ ವಯೋವೃದ್ಧರು, ಮಹಿಳೆಯರು ಏಣಿ ಹತ್ತಿ ಹೋಗುವುದು ಕಷ್ಟ ಸಾಧ್ಯವಾಗಿದೆ.

ಗ್ರಾಹಕರು ಏಣಿ ಬಳಸಿ ಬ್ಯಾಂಕ್ ಶಾಖೆಗೆ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗುತ್ತಿದ್ದಂತೆ ಎಚ್ಚೆತ್ತ ಕಟ್ಟಡ ಮಾಲೀಕ ಕೂಡಲೇ ಉಕ್ಕಿನಿಂದತ ಯಾರಿಸಿದ ಮೆಟ್ಟಿಲುಗಳನ್ನು ಅಳವಡಿಸಿ ಬ್ಯಾಂಕಿಗೆ ಪ್ರವೇಶಿಸಲು ಅನುಕೂಲವಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.

Author