ಮೈಸೂರು,ವರುಣ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ದಾವೋಸ್ ಸಭೆಗೆ ಸಿಎಂ ಗೈರಾಗಿದ್ದನ್ನು ಪ್ರಶ್ನಿಸಿರುವ ಅವರು, ಅಬಕಾರಿ ಇಲಾಖೆಯ ಲಂಚಾವತಾರ ಪ್ರಕರಣದಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ, ವರುಣಾ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ ವಿಚಾರ ಕುರಿತು ಇದು ಕಾಂಗ್ರೆಸ್ ಸಂಸ್ಕೃತಿ, ಸಿದ್ದರಾಮಯ್ಯ ಸಂಸ್ಕೃತಿ ಎಂದರು.ಸರ್ವೇ ನಡೆಸಲು ಹೋದ ಅಧಿಕಾರಿಗಳ ಮೇಲೆ ಮಹಿಳೆ ಅಂತಾನು ನೋಡದೆ ನಿಂದಿಸಿದ್ದಾರೆ. ವರುಣಾದಲ್ಲಿ ಇದೇ ಮೊದಲಲ್ಲ ಈ ಹಿಂದೆಯೂ ಇಂತಹ ಘಟನೆ ನಡೆದಿದೆ ಎಂದರು.
ಸ್ವತಃ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಗೆ ಕಪಾಳಕ್ಕೆ ಹೊಡೆಯಲು ಹೋಗಿದ್ರು. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ಅಧಿಕಾರಿಗೆ ನಿಂದಿಸಿದ್ದಾರೆ.ಇದು ಕಾಂಗ್ರೆಸ್ ಪುಂಡಗಳ ವರ್ತನೆ ಎಂದು ಕಿಡಿಕಾರಿದರು.
ಮಾತಿಗೆ ಮುನ್ನ ಸಿಎಂ ಡಿಸಿಎಂ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡ್ತಾರೆ, ದಾವೋಸ್ ನಲ್ಲಿ ಬಂಡವಾಳ ಶಾಹಿಗಳ ಸಭೆ ನಡೆಯುತ್ತಿದೆ, ಎಲ್ಲಾ ರಾಜ್ಯದ ಸಿಎಂ ಗಳು ಹೋಗಿದ್ದಾರೆ.ರಾಜ್ಯಕ್ಕೆ ಬಂಡವಾಳ ಹೂಡುವಂತೆ ಕೇಳಿದ್ದಾರೆ, ಆದ್ರೆ ನಮ್ಮ ರಾಜ್ಯದ ಸಿಎಂ ಡಿಸಿಎಂ ಇಬ್ಬರು ಹೋಗಿಲ್ಲವೆಂದರು.ರಾಜ್ಯದ ಹಿತಾಸಕ್ತಿ ಮರೆತಿದ್ದಾರೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.
ಮನರೆಗಾ ಬಗ್ಗೆ ಚರ್ಚಿಸೋದು ಏನಿದೆ ಬದನೆಕಾಯಿ,ಇದು ಸಿಎಂ ಸಿದ್ದರಾಮಯ್ಯ ಚದುರಂಗ ಆಟ ಆಡೋಕೆ ಹೋಗಿರೋದು,ಅದಕ್ಕಾಗಿ ಡಿಸಿಎಂ ಕೂಡ ದಾವೋಸ್ ಗೆ ಹೋಗಿಲ್ಲ,ಗಾಂಧಿಜಿ ಬಗ್ಗೆ ನಿಜಕ್ಕೂ ಗೌರವಿದೆ ಅಂದ್ರೆ ಬಿಜೆಪಿಗೆ ಮಾತ್ರ ಎಂದರು.
ಜನರು ಛಿ ತೂ ಅಂತ ಉಗಿಯೋ ಮುನ್ನ ಈ ಸರ್ಕಾರ ಬುದ್ಧಿ ಕಲಿಯಬೇಕು ಎಂದರು.
ಅಬಕಾರಿ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಅಬಕಾರಿ ಸಚಿವರ ಹೆಸರು ಕೇಳಿ ಬಂದಿದೆ.ಈ ಕೂಡಲೇ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು.ನೈತಿಕ ಹೊಣೆಯನ್ನ ಸಿಎಂ ಸಿದ್ದರಾಮಯ್ಯ ಅವರೇ ಹೊರಬೇಕು ಎಂದು ವಿಜಯೇಂದ್ರ ಅಗ್ರಹಿಸಿದರು.



