ಚಿಕ್ಕಬಳ್ಳಾಪುರ | ಕಾಂಗ್ರೆಸ್ ಮುಖಂಡನಿಂದ ಪಾಲಿಕೆ ಆಯುಕ್ತೆಗೆ ಅಸಭ್ಯ ಬೈಗುಳ, ಜೀವ ಬೆದರಿಕೆ ; ಆಡಿಯೋ ವೈರಲ್!

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ, ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ನಗರಸಭೆ ಆಯುಕ್ತೆಗೆ ಇದೀಗ ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.

ನಗರ ಸಭೆ ಆಯುಕ್ತೆ ಅಮೃತಾಗೌಡಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆದಿದೆ.

ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾದ ಬ್ಯಾನರ್​ ತೆರವುಗೊಳಿಸಿದ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ್ದಾರೆ. ಅಲ್ಲದೇ ಫೋನ್ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

ಅಮ್ಮನ್ ಅಕ್ಕನ್ ಅಂತ ಬಾಯಿಗೆ ಬಂದಂಗೆ ಕೆಟ್ಟ ಶಬ್ಧಗಳಿಂದ ಬೈದಿದ್ದಾರೆ, ಇದರಿಂದ ನೊಂದ ಅಧಿಕಾರಿ ಅಮೃತ ಗೌಡ ಕಣ್ಣೀರಿಟ್ಟಿದ್ದಾರೆ.

ಸದ್ಯ ರಾಜೀವ್ ಗೌಡ ಬೈದಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ರಾಜೀವ್ ಗೌಡ ವರ್ತನೆ ಬಗ್ಗೆ ಅಧಿಕಾರಿಗಳ ವಯಲದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಮೃತ ಗೌಡಗೆ ಪ್ರಾಣಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ರಾಜೀವ್ ಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ನಗರ ಸಭೆ ಆಯುಕ್ತ ಅಮೃತಾಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ ಬ್ಯಾನರ್ ತೆರವು ಮಾಡಿದ ಹಿನ್ನೆಲೆಯಲ್ಲಿ ಅವಾಜ್ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.

ಚಪ್ಪಲಿಯಲ್ಲಿ ಹೊಡೆದು ದಂಗೆ ಎಬ್ಬಿಸುವುದಾಗಿ ಬೆದರಿಕೆ ಆರೋಪ ಕೇಳಿ ಬಂದಿದೆ ಶಾಸಕ ಬಿ.ಎನ್ ರವಿಕುಮಾರ್ ಕೂಡ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಅಷ್ಟೆ ಅಲ್ಲದೆ ಪರೋಕ್ಷವಾಗಿ ಸಚಿವ ಡಾ.ಎಂ.ಸಿ ಸುಧಾಕರ್ ಗು ನಿಂದನೆ ಮಾಡಿದ್ದಾನೆ.ಕಾಂಗ್ರೆಸ್ ಮುಖಂಡನ ಬೆದರಿಕೆಗೆ ನಗರಸಭೆ ಸಿಬ್ಬಂದಿಗಳು ಭಯಭೀತರಾಗಿದ್ದಾರೆ.

ಇನ್ನು ಈ ಸಂಬಂಧ ರಾಜೀವ್ ಗೌಡ ಸುವರ್ಣ ನ್ಯೂಸ್ ನಲ್ಲಿ ನನ್ನಿಂದ ತಪ್ಪಾಗಿದೆ ಆಯುಕ್ತೆ ನನ್ನ ಸಹೋದರಿ ಇದ್ದಂತೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾಗಿದೆ.

ಕಾಂಗ್ರೆಸ್ ಪಕ್ಷದ ಮುಖಂಡರು ಮಹಿಳಾ ಸಬಲೀಕರಣ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಸಹಿಸುವುದಿಲ್ಲ ಎಂದು ಹೇಳಿಕೆ ನೀಡುತ್ತಾರೆ.

ಪ್ರಸ್ತುತ ಘಟನೆ ಸಂಬಂಧ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರು ಈ ಘಟನೆ ಸಂಬಂಧ ಮಹಿಳೆಯ ಪರವಾಗಿ ಧ್ವನಿಯಾಗುತ್ತಾರ? ಅಥವಾ ಮಹಿಳಾ ಅಧಿಕಾರಿಯದ್ದೆ ತಪ್ಪು ಎಂಬಂತೆ ಬಿಂಬಿಸುತ್ತಾರ? ಕಾದು ನೋಡಬೇಕಿದೆ..!

Author