ನಶ ಮುಕ್ತ (ನಶೆ) ಅಭಿಯಾನ ಮತ್ತು ಅಭಿಯಾನ ಅಯೋಜಕರು” : ಕೆ ಪಿ ಶ್ರೀಪಾಲ್ ವಕೀಲರು

ಶಿವಮೊಗ್ಗ

ರಾಮಕೃಷ್ಣ ಪರಮಹಂಸರ ಬಳಿ ಒಬ್ಬರು ತಾಯಿ ತನ್ನ ಮಗುವನ್ನು ಕರೆತಂದು ನನ್ನ ಮಗ ವಿಪರೀತ ಬೆಲ್ಲಾ ತಿನ್ನುತ್ತಿದ್ದಾನೆ ಅವನಿಗೆ ಬುದ್ದಿ ಹೇಳಿ ಬೆಲ್ಲ ತಿನ್ನುವುದನ್ನು ಬಿಡಿಸಿ ಅಂತ ಕೇಳಿಕೊಂಡರಂತೆ ಅದಕ್ಕೆ ಪರಂಹಂಸರು ನಾಲ್ಕು ದಿನ ಬಿಟ್ಟು ಬನ್ನಿ ಅಂತಾ ಆ ತಾಯಿ ಮತ್ತು ಮಗುವನ್ನು ವಾಪಾಸ್ಸು ಕಳುಹಿಸಿದರಂತೆ, ಮತ್ತೆ ಆ ತಾಯಿ ನಾಲ್ಕು ದಿನ ಬಿಟ್ಟು ಬಂದಾಗ , ಮತ್ತೊಮ್ಮೆ ನಾಲ್ಕು ದಿನ ಬಿಟ್ಟು ಬನ್ನಿ ಅಂತಾ ವಾಪಾಸು ಕಳುಹಿಸಿದರಂತೆ, ಮತ್ತೆ ಆ ತಾಯಿ ಎರಡನೇ ಬಾರಿಯು ನಾಲ್ಕು ದಿನ ಕಳೆದು ಮಗನನ್ನು ಕರೆದುಕೊಂಡು ರಾಮಕೃಷ್ಣ ಪರಮಹಂಸರ ಬಳಿ ಬಂದಾಗ ಆಗ ಪರಮಹಂಸರು ಆ ಮಗುವಿಗೆ ನೋಡು ಮಗು ಬೆಲ್ಲ ಹೆಚ್ವಿಗೆ ತಿನ್ನಬಾರದು ಹಲ್ಲು ಹಾಳಗುತ್ತೆ, ಆರೋಗ್ಯ ಹದಗೆಡುತ್ತೆ ಆ ಚಾಳಿಯನ್ನು ಬಿಡು ಅಂತಾ ಬುದ್ದಿ ಹೇಳಿದರಂತೆ, ಆಗ ಆ ತಾಯಿಗೆ ಅಚ್ಚರಿ ಆಯಿತಂತೆ ಈ ಮಾತುಗಳನ್ನು ನಾವು ಮೊದಲು ಬಂದಾಗಲೆ ಹೇಳಬಹುದಿತ್ತಲ್ಲಾ ಅದಕ್ಕಾಗಿ ಎರೆಡೆರಡು ಬಾರಿ ನಮ್ಮನ್ನು ವಾಪಾಸು ಕಳಿಸಿದ್ದಿರಲ್ಲಾ ಎಂದಾಗ ರಾಮಕೃಷ್ಣ ಪರಮಹಂಸರು ಹೇಳಿದರಂತೆ ನೊಡಮ್ಕ ಮೊನ್ನೆಯವರೆಗೂ ನಾನೆ ವಿಪರೀತ ಬೆಲ್ಲಾ ತಿನ್ನುತ್ತಿದ್ದೆ, ನಾನು ಆ ಚಾಳಿ ಬಿಡದೆ ಮಗುವಿಗೆ ಹೇಳಲು ನನಗೆ ನೈತಿಕತೆಯೆ ಇರಲಿಲ್ಲ, ಈಗ ನಾನು ಆ ಬೆಲ್ಲಾ ತಿನ್ನುವ ಚಾಳಿ ಬಿಟ್ಟೆ ಹಾಗಾಗಿ ಮಗುವಿಗೆ ಬುದ್ದಿ ಹೇಳಿದೆ ಎಂದರಂತೆ.

ಇತ್ತೀಚಿನ ದಿನಗಳಲ್ಲಿ ನಾವು ನಶ ಮುಕ್ತ ಸಮಾಜ ನಿರ್ಮಾಣವಾಗಬೇಕು ಯುವ ಸಮೂಹ ಸಂಪೂರ್ಣ ದಾರಿತಪ್ಪಿದೆ ಎಂದು ಹೇಳುತ್ತಿದ್ದೇವೆ.

ಈ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು , ಪೋಲಿಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರಗಳು ವಿವಿದ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ರಿವೆ. ವಿಪರ್ಯಾಸವೆಂದರೆ ಸರ್ಕಾರವೆ ತಾಯರಿಸಿ ಖಾಸಗಿಯಾಗಿ ಪರವಾನಿಗೆ ನೀಡಿ ಮದ್ಯ ಮಾರಾಟ ಮಾಡಿಸಿ ಬೊಕ್ಕಸಕ್ಕೆ ಹಣ ತುಂಬಿಕೊಳ್ಳುತ್ತಿದೆ, ಇನ್ನು ಕೆಲವೆಡೆ ಡ್ರಗ್ಸ್ ,ಗಾಂಜಾ ಈ ತರದ ಮಾರಾಟಗಾರರು ಪೆಡ್ಲರ್ ಗಳು ಅಧಿಕಾರಸ್ತರ ಪ್ರಭಾವದಲ್ಲಿರುವ ಮತ್ತು ಪೋಲಿಸ್ ಸಂಪರ್ಕದಲ್ಲಿರುವವರೆ ಆಗಿರುತ್ತಾರೆ.

ಇದರ ಮದ್ಯೆ ಕೆಲವು NGO ಗಳು ಸಹ ಈ ನಶೆ ಮುಕ್ತತತೆ ಬಗ್ಗೆ ಅಬಿಯಾನ ಹಮ್ಮಿಕೊಂಡಿವೆ, ಈ ಕಾರ್ಯಕ್ರಮಗಳ ಆಯೋಜಕರು, ರೂವಾರಿಗಳಲ್ಲಿ ಬಹುತೇಕರು ನಶೆ ಏರಿಸುವ ಕ್ಲಬ್ ಗಳ ಅಜೀವ ಸದಸ್ಯರು, ವೈನ್ ಶಾಪ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರೆ ಇದ್ದಾರೆ, ರಾತ್ರಿ ತಾವೆ ಹಣ ಪಡೆದು ನಶೆ ಏರಿಸಿಕೊಳ್ಳಲು ಅವಕಾಶಮಾಡಿಕೊಟ್ಟು ತಾವು ಸಹ ನಶೆಯುಕ್ತರಾಗಿ ಬೆಳಿಗ್ಗೆ ನಶೆ ಇಳಿದೊಡೆ ನಶೆ ಮುಕ್ತ ಸಮಾಜ ನಿರ್ಮಾಣದ ಅಭಿಯಾನ ಹಮ್ಮಿ ಕೊಳ್ಳುತ್ತಿರುವುದು ದುರಂತ.

ನಶ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಈ ಅಭಿಯಾನ ಮಾಡುವ ಸರ್ಕಾರ, ಸಂಘ ಸಂಸ್ಥೆಗಳು, ಅಧಿಕಾರಸ್ಥರು, ಪೋಲಿಸರು ಮೊದಲು ನಶೆ ಮುಕ್ತರಾಗಿರಬೇಕು, ಮಕ್ಕಳಿಗೆ ಬಾಲ್ಯದಿಂದಲೆ ಪಠ್ಯದಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು, ಸರ್ಕಾರ ನಶೆಯುಕ್ತ ದ್ರವ್ಯ,ಪದಾರ್ಥಗಳ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸಬೇಕು,

ಅಧಿಕಾರಿ ವರ್ಗಾ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು, ಮನೋರಂಜನೆ ಹೆಸರಿನಲ್ಲಿ ನಶೆಯ ಮತ್ತೆರಿಸುವ ಕ್ಲಬ್ ಗಳನ್ನು ಬಂದ್ ಮಾಡಬೇಕು ಈ ಸುಧಾರಣೆಗಳನ್ನು ಮಾಡಾದೆ ಪ್ರಚಾರಕ್ಕಾಗಿ ಮಾಡುವ ನಶ ಮುಕ್ತ ಕಾರ್ಯಕ್ರಮಗಳು ಯಾವ ಬದಲಾವಣೆಯನ್ನು ತರಲಾರವು.

ಬರಹ : – ಕೆ.ಪಿ.ಶ್ರೀಪಾಲ. ವಕೀಲರು.

Author