ಕಾರ್ಕಳ,ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಅವರನ್ನು ಇಂದು ಭೇಟಿಯಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಳ ಮಾಡುವ ಕುರಿತಂತೆ ಮುಂಬರುವ ಬಜೆಟ್ ನಲ್ಲಿ ಅನುದಾನ ಒದಗಿಸುವಂತೆ ರಾಜ್ಯದ ಮುಖ್ಯಮಂತ್ರಿ ಅವರಿಗೆ ಸುನಿಲ್ ಕುಮಾರ್ ಶಾಸಕರ ಮೂಲಕ,ಅತಿಥಿ ಉಪನ್ಯಾಸಕರ ಸಂಘಟನೆ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಮಾನ್ಯ ಮುಖ್ಯಮಂತ್ರಿ ಅವರ ಗಮನವನ್ನು ಸೆಳೆದು ಅನುದಾನವನ್ನು ಒದಗಿಸಿಕೊಡಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಆಶ್ವಾಸನೆ ನೀಡಿದ್ದಾರೆ. ಎಂದು ಪ್ರಕಟಣೆ ಮೂಲಕ ಸಂಘಟನೆ ತಿಳಿಸಿದೆ



