ಶಿವಮೊಗ್ಗ | ಪೂರ್ವ ಸಂಚಾರಿ ಪೊಲೀಸರಿಂದ ರಸ್ತೆ ಸುರಕ್ಷತಾ ಮಾಸದ ಪ್ಲೇಕಾರ್ಡ್‌ ಪ್ರದರ್ಶನ ಮತ್ತು ಜಾಗೃತಿ ಅರಿವು

ಶಿವಮೊಗ್ಗ

ಶಿವಮೊಗ್ಗದಲ್ಲಿ ಇಂದು ಪೂರ್ವ ಸಂಚಾರಿ ಟ್ರಾಫಿಕ್ ಪೊಲೀಸರು ಮತ್ತು ಆರ್‌ಟಿಒ ಅಧಿಕಾರಿಗಳೊಂದಿಗೆ ರಸ್ತೆ ಸುರಕ್ಷತಾ ಮಾಸದ ಮುನ್ನಾದಿನದ ಪ್ರಯುಕ್ತ ಸಂಚಾರ ಜಾಗೃತಿಯ ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸಿದರು.

ಇದರೊಟ್ಟಿಗೆ ನಗರದಲ್ಲಿ ವಾಹನ ಚಲಾಯಿಸುವಾಗ ಸುರಕ್ಷತೆಗೆ ಮುಖ್ಯ ಆದ್ಯತೆ ಕೊಡಿ ಹಾಗೂ ಸಂಚಾರ ನಿಯಮ ಪಾಲಿಸಿ,ದ್ವಿಚಕ್ರ ವಾಹನದಲ್ಲಿ ಮಕ್ಕಳ ಕೂರಿಸಿಕೊಂಡು ವಾಹನ ಚಲಾಯಿಸುವಾಗ ಮಕ್ಕಳ ಸುರಕ್ಷತೆ ಆದ್ಯತೆ ನೀಡಿ, ಮಕ್ಕಳಿಗೆ ಹೆಲ್ಮೆಟ್ ಧರಿಸಿ, ಹೀಗೆ ಇತ್ಯಾದಿ ಪ್ಲೇಯಕಾರ್ಡ್ಸ್ ಮೂಲಕ ಸಂಚಾರಿ ಪೊಲೀಸರು ಜಾಗೃತಿ ಮತ್ತು ಅರಿವು ಮೂಡಿಸಿದರು.

Author