ಹೊಸವರ್ಷದ ದಿನ ಹೊಡೆದಾಟ ಪ್ರಕರಣ ; ಐವರ ವಿರುದ್ಧ ಎಫ್ ಐ ಆರ್

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಹೊಸನಗರದ ಈಡಿಗರ ಸಭಾಭವನದ ಬಳಿ ಹೊಸವರುಷದ ದಿನ,ರಾತ್ರಿ ನಡೆದ ಗಲಾಟೆಯೊಂದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ವಿಡಿಯೋದಲ್ಲಿ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸ್ತಿರುವ ದೃಶ್ಯವಿದೆ. ಎಫ್​ಐಆರ್​ನ ಪ್ರಕಾರ,THE BHARATIYA NYAYA SANHITA (BNS), 2023 (U/s-352,115(2), 118(1),324(4),109,190) ಅಡಿಯಲ್ಲಿ ಕೇಸ್ ದಾಖಲಾಗಿದೆ. ಒಟ್ಟು ಐದು ಮಂದಿ ಆರೋಪಿಯಾಗಿದ್ದ ಮಾಜಿ ಶಾಸಕರ ಪುತ್ರನ ಹೆಸರು ಸಹ ಆರೋಪಿತರ ಪಟ್ಟಿಯಲ್ಲಿದೆ.

ಜನವರಿ 1 ರಂದು ತಡರಾತ್ರಿ ಎರಡು ಗಂಟೆ ಸುಮಾರಿಗೆ ಮಾಧವ ಶೆಟ್ಟಿ ಎಂಬವರು ಬೆಂಗಳೂರಿಗೆ ಹೋಗುತ್ತಿದ್ದವರು, ಪೇಟೆ ಸಮೀಪ ತಮ್ಮ ವೆಹಿಕಲ್​ ಸ್ಲೋ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ಆರೋಪಿಯೊಬ್ಬರು ಮಾಧವರನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂಬುದು ದೂರು.

ಈ ವೇಳೆ 55 ಸಾವಿರ ರೂಪಾಯಿ ಬೆಲೆಯ ಮೊಬೈಲ್ ಫೋನನ್ನು ಜಖಂ ಮಾಡಿದ್ದು, ಕೊರಳಲ್ಲಿದ್ದ ಚಿನ್ನದ ಸರ ಕಳೆದುಹೋಗಿದೆ ಎಂದು ಸಹ ಆರೋಪಿಸಲಾಗಿದೆ. ಪ್ರಕರಣದಲ್ಲಿ ರಾಜಕಾರಣ ಕೂಡ ಸೇರಿಕೊಂಡಿದ್ದು, ಸಂತ್ರಸ್ತರು ತಮಗೆ ನ್ಯಾಯ ಒದಗಿಸಬೇಕು ಎಂದು ಮಾತನಾಡಿದ್ದಾರೆ.

ಇನ್ನೊಂದೆಡೆ ಘಟನೆಯ ಹಿನ್ನೆಲೆಯಲ್ಲಿ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.

Author