ಬ್ಯಾಂಕ್ ಮ್ಯಾನೇಜರ್ 70 ಲಕ್ಷ ಹಣ ಚಿನ್ನಾಭರಣ ಜೊತೆ ಪರಾರಿ

ದಕ್ಷಿಣ ಕನ್ನಡ

ಬಂಟ್ವಾಳ, ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಸುಬ್ರಹ್ಮಣ್ಯಂ(30)ಎಂಬಾತ ಉಂಡ ಮನೆಗೆ ಕನ್ನ ಕೊರೆದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಈತ 06/02/2024ರಿಂದ 16/12/2025 ವರೆಗೆ ಎಟಿಎಂಗೆ ನಿಗದಿತ ಹಣ ಜಮಾ ಮಾಡದೇ 70,86,000/-ನಗದು ಮುಳುಗಿಸಿ 17/12/2025ರಂದು ಯಾರಿಗೂ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ ಎಂಬ ಮಾಹಿತಿಯಾಗಿದೆ.

ಬ್ಯಾಂಕ್ ಮ್ಯಾನೇಜರ್ ಪರಾರಿಯಾದ ಬಗ್ಗೆ ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಪೆರ್ನೆ ಶಾಖೆಗೆ 19-12-2025 ರಂದು ಬಂದು ಸೇಫ್ ಲಾಕರ್ ಪರಿಶೀಲನೆ ನಡೆಸಿದಾಗ ರೂ.55,000/- ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಕೂಡಾ ಬೆಳಕಿಗೆ ಬಂದಿದೆ. ಪರಾರಿಯಾದ ಬ್ಯಾಂಕ್ ಮ್ಯಾನೇಜರ್ ಸುಬ್ರಹ್ಮಣ್ಯಂ ಎಸಗಿದ ಒಟ್ಟು ವಂಚನೆಯ ಮೌಲ್ಯ ರೂ.71,41,000/- ಆಗಿರುತ್ತದೆ ಎಂದು ಪಿರ್ಯಾದುದಾರ

C.V.S. ಚಂದ್ರಶೇಖರ್ (50), ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕರು, ಜೆಪ್ಪು ಮಂಗಳೂರು ರವರು ದಿನಾಂಕ 23-12-2025 ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025, ಕಲಂ 314, 316(5), 318(2) BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ

Author