ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ವೃತ್ತ ವಿಚಾರ ಸಂಬಂಧ ಗಲಾಟೆಗೆ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.ಗುಂಡಾಗಿರಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದ ಮುಖಂಡರಾದ ಶ್ರೀ ರಾಮುಲು, ಆನಂದ್ ಸಿಂಗ್ ಸೇರಿ ಕಾರ್ಯಕರ್ತರನ್ನ ಬೇದರಿಸಬಹುದು ಎಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಿಲ್ಲ ನಾನು ಸಹ ಆಸ್ಪತ್ರೆಗೆ ದಾಖಲಾಗಿರುವ ನಮ್ಮ ಕಾರ್ಯಕರ್ತರನ್ನ ಮಾತನಾಡಿಸಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ವಾಲ್ಮೀಕಿ ಭವನಕ್ಕೆ ಹಣ ಕೊಡಿಸಿದ್ದೆ ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಶ್ರೀ ರಾಮುಲು ಸಚಿವರಾಗಿದ್ದಾಗ ಎಂದರು. 25 ವರ್ಷದ ಹಿಂದೆಯೇ ಅಲ್ಲಿ ಪುತ್ಥಳಿ ಇತ್ತು, ಮಹರ್ಷಿ ವಾಲ್ಮೀಕಿಯನ್ನ ಪೂಜಿಸಬೇಕು ಎಂಬ ಕಾರಣಕ್ಕೆ ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಜಾ ದಿನವನ್ನಾಗಿ ಘೋಷಿಸಿದ್ದರು.
ಆದರೆ ರಾಜಕೀಯ ತೆವಲಿಗೆ ಈಗ ಕಾಂಗ್ರೆಸ್ ಅವರು ಬ್ಯಾನರ್ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾ. ರಾ. ಭರತ್ ರೆಡ್ಡಿ ನೇತೃತ್ವದಲ್ಲಿ ಜನಾರ್ಧನ ರೆಡ್ಡಿ ಮನೆ ಮುಂದೆ ಗಲಾಟೆ ಎಬ್ಬಿಸಿದ್ದಾರೆ ಅಷ್ಟೇ ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಗಳನ್ನ ಕರೆತಂದು ಗೂಂಡಾಗರ್ದಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸಾವಿರಾರು ಗೂಂಡಗರ್ದಿ ಗಳನ್ನು ಕರೆದುಕೊಂಡು ಬರುವ ಮೂಲಕ, ನಿನ್ನೆ ದಿವಸ ಸತೀಶ್ ರೆಡ್ಡಿ ತನ್ನ ಖಾಸಗಿ ವ್ಯಕ್ತಿಗಳ ಬಳಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದವರೇ ಮೊದಲು ನಿಮ್ಮ ಅಪರಾಧಿಯಾದ ಗೂಂಡ ಶಾಸಕ ಭರತ್ ರೆಡ್ಡಿಯನ್ನ ತಾಕತ್ ಇದ್ದರೆ ಒದ್ದು ಒಳಗೆ ಹಾಕಿ ಎಂದರು. ದ್ವೇಷ ಭಾಷಣ ನಿಷೇಧ ತರಲು ಹೊರಟಿದ್ದೀರಾ! ನಿಮಗೆ ನಾಚಿಕೆಯಾಗಬೇಕು ಎಂದರು.
ಒಳ್ಳೆಯ ವಾತಾವರಣ ಹಾಳು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿರುವುದನ್ನ ನಾವು ಖಂಡಿಸುತ್ತೇವೆ ಎಂದರು.ಈ ಪ್ರಕರಣ ವಿರುದ್ದ ಸಮಗ್ರ ತನಿಖೆಗೆ ಶ್ರೀ ರಾಮುಲು ಹಾಗೂ ಜನಾರ್ಧನ ರೆಡ್ಡಿ ಅಗ್ರಹಿಸಿದ್ದಾರೆ.
ಈ ಪ್ರಕರಣ ಕುರಿತು ಸಿಟ್ಟಿಂಗ್ ಹೈಕೋರ್ಟ್ ನ್ಯಾಯಧೀಶರಿಂದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ವಿಜಯೇಂದ್ರ.
ಎಸ್ಐ.ಟಿ ಮಾಡಿ ಕೈ ತೊಳೆದುಕೊಳ್ಳುವ ಕೆಲಸವಗಬಾರದು ಎಂದಿದ್ದಾರೆ.ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಎಲ್ಲಾ ಕೈ ಮಿರುವ ಮುನ್ನ ಗೃಹ ಸಚಿವರು ಎಚ್ಛೆತುಕೊಳ್ಳುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮೃತಪಟ್ಟಿರುವುದು ಅವರ ಖಾಸಗಿ ಗನ್ ಮ್ಯಾನ್ ಗಳ ಗುಂಡಿನಿಂದ ಎಂದರು.
ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿದೆ ಎಂದರು. ಕಾನೂನು ಸುವ್ಯವಸ್ಥೆ ಸರಿ ಇರಬೇಕು ಎಂದರೆ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದರು.
ನಮ್ಮ ಕಾರ್ಯಕರ್ತರು ಯಾರು ಧೃತಿಗೆಡುವ ಅವಶ್ಯಕತೆಯಿಲ್ಲ.ಈ ಘಟನೆಯನ್ನ ನಮ್ಮ ಬಿಜೆಪಿ ಪಕ್ಷ ಖಂಡಿಸುತ್ತದೆ ಎಂದರು.



