ಮುಂಬಯಿ, ಬಾಲಿವುಡ್‌ನಲ್ಲಿ 2023ರಲ್ಲಿ ‘ದಿ ಕೇರಳ ಸ್ಟೋರಿ ‘ (The Kerala Story) ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಸಿನಿಮಾ ವಿವಾದಕ್ಕೀಡಾದ್ರೂ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು.
ಹಿಂದೂ ಯುವತಿ ‘ಲವ್ ಜಿಹಾದ್’ಗೆ ಒಳಗಾದ ಬಳಿಕ ಏನೆಲ್ಲಾ ಆಗುತ್ತದೆ ಎನ್ನುವುದರ ಕುರಿತು ಕಥೆಯನ್ನು ಸಿನಿಮಾ ಒಳಗೊಂಡಿತ್ತು. ಇದೇ ವಿಚಾರವಾಗಿ ರಾಜಕೀಯ ವಲಯದಲ್ಲಿ ಚಿತ್ರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ಇದರಿಂದ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಇನ್ನು ಕೆಲ ಕಡೆ ಸಿನಿಮಾಕ್ಕೆ ಬೆಂಬಲವಾಗಿ ಅನೇಕು ಸಂಘಟನೆಗಳು ನಿಂತಿದ್ದವು. ವಿವಾದದ ನಡುವೆಯೇ ಚಿತ್ರ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವಲ್ಲಿ ಯಶಸ್ಸಾಗಿತ್ತು.
ಸುದೀಪ್ತೊ ಸೇನ್ ನಿರ್ದೇಶನ, ವಿಪುಲ್ ಶಾ ನಿರ್ಮಾಣದಲ್ಲಿ ಬಂದಿದ್ದ ‘ದಿ ಕೇರಳ ಸ್ಟೋರಿ’ಯಲ್ಲಿ ನಾಯಕಿಯ ಪಾತ್ರದಲ್ಲಿ ಅದಾ ಶರ್ಮಾ (Adah Sharma) ಕಾಣಿಸಿಕೊಂಡಿದ್ದರು.
ಈ ಸಿನಿಮಾ ಎಡಪಂಥೀಯ – ಬಲಪಂಥೀಯರ ನಡುವೆ ಧಾರ್ಮಿಕವಾಗಿ, ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದ್ರೂ, 2023ರ 71ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗಳಲ್ಲಿ ಎರಡು ಪ್ರಶಸ್ತಿಯನ್ನು ಗೆದ್ದಿತ್ತು.

ಇದೀಗ ‘ದಿ ಕೇರಳ ಸ್ಟೋರಿ’ ಸೀಕ್ವೆಲ್ ಬಗ್ಗೆ ವರದಿಗಳು ಹೊರಬಿದ್ದಿವೆ. ಮೂಲಗಳ ಪ್ರಕಾರ ‘ದಿ ಕೇರಳ ಸ್ಟೋರಿ -2’ (The Kerala Story 2) ಚಿತ್ರದ ಚಿತ್ರೀಕರಣವನ್ನು ಸಾಕಷ್ಟು ಬಿಗಿ ಭದ್ರತೆಯಲ್ಲಿ ಮಾಡಲಾಗಿದೆ.
‘ಕೇರಳ ಸ್ಟೋರಿ 2’ನ್ನು ಈಗಾಗಲೇ ಅತ್ಯಂತ ಸುರಕ್ಷಿತ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರೀಕರಣದ ವೇಳಾಪಟ್ಟಿಯ ಸಮಯದಲ್ಲಿ ಯಾವುದೇ ತೊಂದರೆಗಳು ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ಕಲಾವಿದರು ಹಾಗೂ ಚಿತ್ರತಂಡದ ಸಿಬ್ಬಂದಿಗಳು ಯಾರೂ ಕೂಡ ಮೊಬೈಲ್ ಫೋನ್ ತರಲು ಅವಕಾಶವಿರಲಿಲ್ಲ ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಇದೇ ವರ್ಷ ಫೆಬ್ರವರಿ ತಿಂಗಳ 27ರಂದು ‘ದಿ ಕೇರಳ ಸ್ಟೋರಿ -2’ ರಿಲೀಸ್ ಆಗಲಿದೆ. ಸದ್ಯ ಪಾತ್ರವರ್ಗವನ್ನೂ ಕೂಡ ಅತ್ಯಂತ ಗೌಪ್ಯವಾಗಿಡಲಾಗಿದೆ.



