ಚಿತ್ರದುರ್ಗ | ಅಪಘಾತದಲ್ಲಿ ಎಎಸ್ಐ ದುರ್ಮರಣ

ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗರೆ ಕ್ರಾಸ್ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಪರುಶುರಾಂಪುರ ಠಾಣೆಯ ಎಎಸ್ಐ ಮಂಜುನಾಥ್ (50)ದುರ್ಮರಣಕ್ಕಿಡಾಗಿದ್ದಾರೆ.

ಬೈಕ್ ನಲ್ಲಿ ಕಾನ್ಸ್ಟೇಬಲ್ ಸೂರ್ಯಪ್ರಭಾರೊಂದಿಗೆ ತೆರಳುತ್ತಿದ್ದಾಗ ಬೈಕ್ ಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ದುರ್ಘಟನೆ ನಡೆದಿದೆ.

ಕಾನ್ಸ್ಟೇಬಲ್ ಸೂರ್ಯಪ್ರಭಾರವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕೆತ್ಸೆಗೆ ಆಸ್ಪತ್ರೆ ದಾಖಲಾಗಿದ್ದಾರೆ.

ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Author