ಜನವರಿ 5 ರಿಂದ ದೇಶಾದ್ಯಂತ ‘MGNREGA ಬಚಾವೋ’ ಅಭಿಯಾನ : ಖರ್ಗೆ ಹೇಳಿಕೆ

ರಾಜಕೀಯ

ನವದೆಹಲಿ, ಯುಪಿಎ ಸರಕಾರದ ಕಾಲದ ಗ್ರಾಮೀಣ ಉದ್ಯೋಗ ಕಾಯ್ದೆ ಮಹಾತ್ಮ ಗಾಂಧಿ ನರೇಗಾ (MGNREGA) ರದ್ದತಿಯ ವಿರುದ್ಧ ಕಾಂಗ್ರೆಸ್‌ ಜನವರಿ 5 ರಂದು ಅಭಿಯಾನವನ್ನು ಪ್ರಾರಂಭಿಸಲಿದೆ.

‘ಜನರು ಕೋಪಗೊಂಡಿದ್ದಾರೆ ಮತ್ತು ನರೇಂದ್ರ ಮೋದಿ ಸರಕಾರವು ಈ ಕ್ರಮದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ನಂತರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ದೇಶಾದ್ಯಂತ ‘ಎಂಜಿಎನ್‌ಆರ್‌ಇಜಿಎ ಬಚಾವೋ ಅಭಿಯಾನ’ವನ್ನು ಪಕ್ಷ ಮುನ್ನಡೆಸಲಿದೆ ಎಂದು ಹೇಳಿದ್ದಾರೆ.

20 ವರ್ಷಗಳಷ್ಟು ಹಳೆಯದಾದ MGNREGA ಬದಲಿಗೆ ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಅವೈಜ್ಞಾನಿಕ ಮಿಷನ್ VB-G RAM G(Viksit Bharat-Guarantee for Rozgar and Ajeevika Mission) ಮಸೂದೆಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ ತೀವ್ರ ಪ್ರತಿಭಟನೆಗಳ ನಡುವೆಯೂ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಹೊಸ ಕಾಯ್ದೆ ಗ್ರಾಮೀಣ ಕಾರ್ಮಿಕರಿಗೆ 125 ದಿನಗಳ ಕೂಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸುತ್ತದೆ.

Author