ಭಾರತ ದೇಶದ ಮೊದಲ ಫೆಮಿನಾ ಮಿಸ್ ಇಂಡಿಯಾ ಮತ್ತು ಪ್ರಸಿದ್ಧ ಫ್ಯಾಷನ್ ಪತ್ರಕರ್ತೆ ಮೆಹರ್ ಕ್ಯಾಸ್ಟೆಲಿನೊ ಅವರು ನಿಧನರಾಗಿದ್ದು, ಅವರ ನಿಧನಕ್ಕೆ ಭಾರತೀಯ ಫ್ಯಾಷನ್ ಸಮುದಾಯ ಶೋಕ ವ್ಯಕ್ತಪಡಿಸುತ್ತಿದೆ.
ಫ್ಯಾಷನ್ ಉದ್ಯಮದಲ್ಲಿ ಪ್ರವರ್ತಕಿಯಾಗಿದ್ದ ಅವರು, ಭಾರತೀಯ ಮಹಿಳೆಯರು ಆತ್ಮವಿಶ್ವಾಸ ಮತ್ತು ಆಕಾಂಕ್ಷೆಯೊಂದಿಗೆ ಸಾರ್ವಜನಿಕರ ಗಮನಕ್ಕೆ ಬರಲು ದಾರಿ ಮಾಡಿಕೊಟ್ಟವರು.ಅವರ ಸಾವನ್ನು ಫೆಮಿನಾ ಮಿಸ್ ಇಂಡಿಯಾ ಸಂಸ್ಥೆ ದೃಢಪಡಿಸಿದ್ದು, ಸೋಷಿಯಲ್ ಮೀಡಿಯಾ ಮೂಲಕ ಗೌರವ ಸೂಚಿಸಿದೆ.
ಅವರನ್ನು ಮಾರ್ಗದರ್ಶಕಿ ಎಂದು ಬಣ್ಣಿಸುತ್ತಾ, ಕ್ಯಾಸ್ಟೆಲಿನೊ ಮಹಿಳೆಯರಿಗೆ ಅವಕಾಶದ ಬಾಗಿಲು ತೆರೆದು ಮಾನದಂಡಗಳನ್ನು ನಿಗದಿಪಡಿಸಿದ್ದರು. ತಲೆಮಾರುಗಳಿಂದ ಮಹಿಳೆಯರು ನಿರ್ಭಯವಾಗಿ ಕನಸು ಕಾಣಲು ಅಡಿಪಾಯ ಹಾಕಿಕೊಟ್ಟವರು ಎಂದು ಸಂಸ್ಥೆ ಹೇಳಿದೆ.
ಮೊದಲ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತೆಯಾಗಿ, ಅವರ ಗೆಲುವು ಭಾರತೀಯ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲಿ ಒಂದು ನಿರ್ಣಾಯಕ ಕ್ಷಣವನ್ನು ಗುರುತಿಸಿದೆ ಎಂದು ಫೆಮಿನಾ ಮಿಸ್ ಇಂಡಿಯಾ ಸಂಸ್ಥೆ ಹೇಳಿದೆ.



