ಶಿವಮೊಗ್ಗ ಜಿಲ್ಲೆಯ ಹೊಸನಗರದ ಕೊಡಚಾದ್ರಿ ಬಸ್ ಮಾಲೀಕ ಪಿ ಮನೋಹರ್ ಸಹೋದರ ಸುರೇಶ್ ಅವರ ಪುತ್ರ ನಾಗಭೂಷಣ್ (21) ಬೆಂಗಳೂರಿನಲ್ಲಿ ಬೈಕ್ ಅಪಘಾತದಲ್ಲಿ ಬುಧವಾರ ನಿಧನರಾಗಿದ್ದಾರೆ.
ನಾಗಭೂಷಣ್ ಬೆಂಗಳೂರಿನ ಇಂಜೀನಿಯರಿಂಗ್ ಕಾಲೇಜೊಂದರ 4ನೇ ವರ್ಷದ ವಿದ್ಯಾರ್ಥಿಯಾಗಿದ್ದು ಇವರು ತಂದೆ ಸುರೇಶ್, ತಾಯಿ ವರಲಕ್ಷ್ಮೀ, ಸಹೋದರಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಹೊಸನಗರದ ಶಿವಮೊಗ್ಗ ರಸ್ತೆಯ ಇವರ ಮನೆಯಲ್ಲಿ ಗುರುವಾರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಮಾರಿಗುಡ್ಡದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು



