ಶಿವಮೊಗ್ಗ | ಸಂಸದರಿಂದ ಸುಳ್ಳು ಮಾಹಿತಿ, ಶಾಸಕರಿಂದ ಮತ್ತೆ ಗುದ್ದಲಿಪೂಜೆ : ಎಚ್. ಸಿ. ಯೋಗೇಶ್ ವಾಗ್ದಾಳಿ

ಶಿವಮೊಗ್ಗದ ನೈಟ್ ಲ್ಯಾಂಡಿಂಗ್ ಸಮಸ್ಯೆ ಬಗ್ಗೆ ಈಗಾಗಲೇ ಸರ್ಕಾರದಿಂದ ಏಳು ಕೋಟಿ ಬಿಡುಗಡೆಯಾಗಿದ್ದು, ಜುಲೈ ಅಂತ್ಯದೊಳಗೆ ನೈಟ್ ಲ್ಯಾಂಡಿಂಗ್ ಪ್ರಾರಂಭವಾಗಲಿದೆ. ತರಾತುರಿಯಲ್ಲಿ ಚುನಾವಣೆ ವೇಳೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಅಂದಿನ ಬಿಜೆಪಿ ಸರ್ಕಾರಕ್ಕೆ ಈ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಮಾಡಿ ಉದ್ಘಾಟನೆ ಮಾಡಬೇಕೆಂಬ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದ ಯೋಗೀಶ್, ತಮ್ಮಿಂದಾದ ಎಲ್ಲಾ ತಪ್ಪುಗಳಿಗೆ ರಾಜ್ಯ ಸರ್ಕಾರವನ್ನು ಹೊಣೆಮಾಡಬೇಡಿ. ಅಪಪ್ರಚಾರ ಮಾಡಿ ಗೊಂದಲ ಸೃಷ್ಟಿಸಬೇಡಿ ಎಂದು ರಾಘವೇಂದ್ರಗೆ ಎಚ್ಚರಿಸಿದರು.