ಶಿವಮೊಗ್ಗ | ಇನ್‌ಸ್ಟಾಗ್ರಾಮ್‌ ಜ್ಯೋತಿಷಿ ನಂಬಿ ಯುವತಿ ಕಳೆದುಕೊಂಡಿದ್ದು 1.84 ಲಕ್ಷ ರೂಪಾಯಿ

ಮೊದಲ ಕಂತಿನ ಹಣ ಕೈಸೇರಿದ ಕೇವಲ ಅರ್ಧ ಗಂಟೆಯಲ್ಲೇ ವಂಚಕರು ಯುವತಿಗೆ ಮರಳಿ ಕರೆ ಮಾಡಿ, ನಿಮ್ಮ ತಾಯಿಗೆ ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ, ಅದಕ್ಕೆ ತಕ್ಷಣ ದೊಡ್ಡ ಪೂಜೆ ಮಾಡದಿದ್ದರೆ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಭಯ ಹುಟ್ಟಿಸಿದ್ದಾರೆ. ಪೂಜೆಯ ವೆಚ್ಚವಾಗಿ 25,000 ಬೇಡಿಕೆಯಿಟ್ಟಾಗ, ತಾಯಿಯ ಜೀವ ಉಳಿದರೆ ಸಾಕೆಂದು ಯುವತಿ ಅವರು ಹೇಳಿದ ಫೋನ್ ಪೇ ನಂಬರ್‌ಗೆ ಹಣ ಕಳುಹಿಸಿದ್ದಾರೆ.