ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ಆಗುಂಬೆ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವೃದ್ಧೆಗೆ ದೊರೆಯಿತು “ಲಯನ್ಸ್ ಕುಟೀರ”

ಆಗುಂಬೆ ವ್ಯಾಪ್ತಿಯಲ್ಲಿ ಸಂಚರಿಸಿದ್ದ ಒಂಟಿ ಸಲಗವು ವೃದ್ಧೆಯ ಮನೆಯ ಸಮೀಪವೇ ಹಾದು ಹೋಗಿದ್ದ ಹಿನ್ನೆಲೆಯಲ್ಲಿ ಅವರ ಸುರಕ್ಷತೆಯ ದೃಷ್ಟಿಯಿಂದಲೂ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು.ನಿರ್ಮಾಣಗೊಂಡ ಮನೆಗೆ “ಲಯನ್ಸ್ ಕುಟೀರ” ಎಂದು ನಾಮಕರಣ ಮಾಡಲಾಗಿದೆ.ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ವೃದ್ಧ ಮಹಿಳೆಗೆ ಮನೆ ಹಸ್ತಾಂತರಿಸಿದರು.