ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ತೀರ್ಥಹಳ್ಳಿಯ ಬಿದರಗೋಡಿನ ಶ್ರೀಧರ್ ನೇಮಕ

ಇದೀಗ ಮುಖ್ಯಮಂತ್ರಿ ಆದಾಗಲೂ ಶಿವಕುಮಾರ್ ಶ್ರೀಧರ್ ಅವರ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಇರಿಸಿ ಅವರನ್ನು ಸರ್ಕಾರದ ಪದ ನಿಮಿತ್ತ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಇದರಿಂದ ಶ್ರೀಧರ್ ಇನ್ನು ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸುಲಲಿತ ಆಡಳಿತಕ್ಕೆ ಬೇಕಾದ ಸಂದರ್ಭ ಸೃಷ್ಟಿ. ಮುಖ್ಯಮಂತ್ರಿ ಕಚೇರಿಯ ದೈನಂದಿನ ಆಡಳಿತ ನಿರ್ವಹಣೆ, ಆಡಳಿತ ಸುಗಮವಾಗಿ ಸಾಗಲು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಪ್ರಮುಖ ಪಾತ್ರ ವಹಿಸುವುದು ಶ್ರೀಧರ್ ಅವರ ಜವಾಬ್ದಾರಿಯಾಗಲಿದೆ.