ಇರುಮುಡಿ ಹೊತ್ತು ಮಣಿಕಂಠನ ದರ್ಶನಕ್ಕಾಗಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್‌.ಡಿ. ಕುಮಾರಸ್ವಾಮಿ

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಹಿಂದೂ ಪುಣ್ಯಕ್ಷೇತ್ರವೇ ಶಬರಿಮಲೆ. ಸ್ವಾಮಿ ಅಯ್ಯಪ್ಪನಿಗೆ ಮುಡಿಪಾಗಿರುವ ದೇವಾಲಯವಾಗಿದ್ದು, ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದಲ್ಲಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.