ಹಾವೇರಿ | ಶಾಲೆ ಫೀಸ್ ಕಟ್ಟಿ ವಿದ್ಯೆ ಕಲಿಸಿದ ಗುರುವಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿ

ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ನವೀನ್, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಬಡತನದ ನಡುವೆ ಬದುಕು ಸಾಗಿಸುತ್ತಿದ್ದರು. ಶಿಕ್ಷಣವನ್ನು ಅರ್ಧದಲ್ಲೇ ಬಿಡುವ ಪರಿಸ್ಥಿತಿ ಎದುರಾದಾಗ, ವಸ್ತ್ರದ್ ಅವರು ತಂದೆಯಂತೆ ಬೆಂಬಲ ನೀಡಿ ಅವರ ಶಿಕ್ಷಣ ಮುಂದುವರಿಯಲು ನೆರವಾದರು.