ತೀರ್ಥಹಳ್ಳಿ| ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ದೂರುದಾರರ ಮಗಳು ಏಪ್ರಿಲ್ 4 ರಂದು ಶಿವಮೊಗ್ಗದಿಂದ ತವರು ಮನೆಗೆ ಬಂದಾಗ, ಶುಭ ಕಾರ್ಯವೊಂದರಲ್ಲಿ ಧರಿಸಲು ತಮ್ಮ ಒಡವೆಗಳನ್ನು ತಂದಿದ್ದರು. ಅವುಗಳನ್ನು ಕೂಡ ಅದೇ ಬೀರುವಿನಲ್ಲಿ ಇರಿಸಲಾಗಿತ್ತು. ಮೇ 7 ರಂದು ರಾತ್ರಿ ಬೀರು ಪರಿಶೀಲಿಸಿದಾಗ ಮಗಳಿಗೆ ಸೇರಿದ ಬಂಗಾರದ ಆಭರಣಗಳಿದ್ದ ಬಾಕ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.